Feedback
Banner

ಬಾಲಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ


ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಬಾಲಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಸಹಯೋಗದಲ್ಲಿ ಬಸವೇಶ್ವರ ಪ್ರೌಢ ಶಾಲೆ ಬ. ಬಾಗೇವಾಡಿಯಲ್ಲಿ ಇದೇ ದಿನಾಂಕ 29-09-2019 ರವಿವಾರದಂದು ಜರುಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟ 2019-20 ಸಾಲೀನ ಬಾಲಬ್ಯಾಂಡ್ಮಿಂಟನ್ ಸ್ಪರ್ಧೇಯಲ್ಲಿ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಸಂಜನಾ ಬಿರಾದಾರ, ರಕ್ಷೀತಾ ಬಿರಾದಾರ, ರಾಜೇಶ್ವರಿ ನಾಡಗೌಡ, ಸಾನಿಯಾ ಮುಲ್ಲ, ಸಂಜನಾ ಮ್ಯಾಗೇರಿ, ರಶ್ಮಿ ಬಡಿಗೇರ, ಸುಧಾ ಬಿರಾದಾರ, ಅರ್ಪಿತಾ ಬಿರಾದಾರ, ಪ್ರಜಕ್ತಾ ಜಾಧವ, ಸೌಮ್ಯ ಸಂಗೋಗಿ, ಸುರಭಿ ಬಿರಾದಾರ, ಅರ್ಪಿತಾ ವಾಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವನಾಂದ ಕೆಲೂರ, ಆಡಳಿತಾಧಿಕಾರಿಗಳಾದ ಸುನೀಲ ನಾವಲಗಿ, ಅಮರೇಶ ಅಳಗುಂಡಗಿ, ಮುಖ್ಯಗುರುಗಳಾದ ಎಸ್.ಎಸ್. ದೊಡಮನಿ, ಎಸ್.ಬಿ. ಹೆಗಳಾಡಿ, ಶಾಲಾ ಸಂಯೋಜಕ ಎನ್.ಜಿ. ಯರನಾಳ, ಆಡಳಿತ ಮಂಡಳಿ ಹಾಗೂ, ದೈಹಿಕ ಶಿಕ್ಷಕರಾದ ಡಿ.ಎಮ್.ಶಿಂಧೆ, ಎಮ್.ಸಿ. ಸಂಗಮ, ದಾನಮ್ಮ ವಾಲಿ, ಪ್ರೀತಿ ಕಾಳೆ, ಶ್ರೀಗಿರಿ ಉಪಾಧ್ಯಯ, ರಾವತ ಉಣ ್ಣಭಾವಿ ಹಾಗೂ ಸಂಗಮೇಶ ಆಲಮೇಲ ವಿದ್ಯಾರ್ಥಿಗಳಿಗೆ ಶುಭಕೊರಿದ್ದಾರೆ.