Feedback
Banner

Surabhi – 2020

ಪಾಲಕರು – ಶಿಕ್ಷಕರು ಮಕ್ಕಳೊಂದಿಗೆ ಮಕ್ಕಳಾಗಬೇಕು
ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುರಭಿ 2020 ವಾರ್ಷೀಕ ಸ್ನೇಹ ಸಮ್ಮೇಳನವನ್ನು ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಶಿಕ್ಷಣ ಆಯುಕ್ತ ಮೇಜರ ಸಿದ್ಧಲಿಂಗಯ್ಯ ಹಿರೇಮಠ ಉದ್ಘಾಟಿಸಿ ಮಾತನಾಡಿದ ಅವರು ಪಾಲಕರು ಹಾಗೂ ಶಿಕ್ಷಕರು ಮಕ್ಕಳೊಂದಿಗೆ ಮಕ್ಕಳಾಗಿ ಅವರ ಆಸಕ್ತಿಯನ್ನು ಅರಿತುಕೊಂಡು ಅವರ ಜೀವನದ ಶಿಲ್ಪಿಯಾಗಿ ಅವರ ಸಾಧನೆಯ ಮೆಟ್ಟಿಲಾಗಿ ಅವರಿಗೆ ಪ್ರೋತ್ಸಾಹಿಸಿದಾಗ ಜೀವನ ಉತ್ತಮವಾಗಿ ರೂಪಗೊಳ್ಳಲು ಸಾಧ್ಯ ಎಂದರು, ಇಂತಹ ಬ್ರಷ್ಠಾಚಾರ ವ್ಯವಸ್ಥೆಯಲ್ಲಿ ಪಾಲಕರು ಹಾಗೂ ಶಿಕ್ಷಕರು ಸತ್ಯ, ಪ್ರಾಮಾಣ ಕತೆ ಹಾಗೂ ಉತ್ತಮ ಮೌಲ್ಯಗಳನ್ನು ಬಿತ್ತಬೇಕು, ಏಕೆಂದರೆ ಮಕ್ಕಳು ಬಿಳಿ ಹಾಳೆಯ ಹಾಗೆ ಅಲ್ಲಿ ನಾವು ಏನನ್ನು ಕಲಿಸುತ್ತೇವೆ ಅದನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ.
ಮಕ್ಕಳಿಗೆ ಅಂಕಗಳಿಕೆಯ ತಂತ್ರಗಳನ್ನು ಹೇಳಿಕೊಡುವುದರ ಜೊತೆಗೆ ಜೀವನದಲ್ಲಿ ಯಶಸ್ಸಿನೊಂದಿಗೆ ಸಾಮಾಜಿಕ ಕಳಕಳಿಯ ಮೌಲ್ಯಗಳ ಮಂತ್ರಗಳನ್ನು ಹೇಳಿಕೊಡಬೇಕು ಎಂದರು.
ಮಕ್ಕಳು ಇಂದಿನ ತಂತ್ರಜ್ಞಾನಗಳು ಶಿಕ್ಷಣಕ್ಕೆ ಹಾಗೂ ಜೀವನದ ಗುರಿಸಾಧನೆಗೆ ಅಸ್ತ್ರವಾಗಿ ಬಳಸಿಕೊಳ್ಳಬೇಕೆಂದರು. ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಎಕ್ಸಲಂಟ್ ಶಾಲೆಯ ಮಕ್ಕಳ ಸಾಧನೆ ಅನನ್ಯ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಸಿ.ಇ.ಟಿ ಪರೀಕ್ಷೆಯಲ್ಲಿ ದೇಶಕ್ಕೆ 105 ನೇ ಸ್ಥಾನ ನೀಡಿದೆ ಇದಕ್ಕೆ ಸಂಸ್ಥೆ ಹಾಗೂ ಶಿಕ್ಷಕರ ವೃತ್ತಿ ಪರತೆಗೆ ಹಿಡಿದ ಕೈಗನಡಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅಮ್ಮನ ಮಡೀಲು ಚಾರೀಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಕ್ಕಳು ದೇಶದ ಆಸ್ತಿ, ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಸಹನಾ ಶೀಲತೆಯನ್ನು ಹಾಗೂ ಸೋಲುಗಳನ್ನು ಮೆಟ್ಟಿಲಾಗಿ ಸ್ವೀಕರಿಸುವ ಮನೋಭಾವನೆಗಳನ್ನು ಬೆಳಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಕ್ಕಳಿಗೆ ಪ್ರಾರಂಭದಿಂದಲೇ ಉತ್ತಮ ಪರಿಸರ ನಿರ್ಮಾಣ ಮಾಡಿದಾಗ ಅದು ಅವರ ಸಾಧನೆಗೆ ರಹದಾರಿ ಆಗುತ್ತದೆ. ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನಿಸಿ ಗೌರವಿಸುವುದು ಎಕ್ಸಲಂಟ್ ಸಂಸ್ಥೆಯ ಸಂಪ್ರದಾಯ ಆದ್ದರಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸುಪ್ರೀಯಾ ಜೋಷಿ ಅವಳಿಗೆ ಸಂಸ್ಥೆಯ ವತಿಯಿಂದ 1 ಲಕ್ಷ ನಗದು ಬಹುಮಾನ ಹಾಗೂ ಉತ್ತಮ ಸಾಧನೆಗೈದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ ಪಾಲಕರು ಮತ್ತು ಶಿಕ್ಷಕರು ಮಕ್ಕಳ ಜೀವನ ರೂಪಿಸುವ ಶಿಲ್ಪಿಗಳು ಎಂದರು. ಪಾಲಕರು ಮಕ್ಕಳೊಂದಿಗೆ ಕೆಲ ಸಮಯವನ್ನು ಮೀಸಲಿಡಬೇಕು ಆಗ ಮಾತ್ರ ಅವರ ಸಾಧನೆ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಹತ್ತಳ್ಳಿ, ಸಂಸ್ಥಯ ನಿರ್ದೇಶಕರುಗಳಾದ ದಯಾನಂದ ಕೆಲೂರ, ಮಂಜುನಾಥ ಕೌಲಗಿ, ಗೌರವ ನಿರ್ದೇಶಕ ರಾಜಶೇಖರ ಕೌಲಗಿ, ಝಿ ಕನ್ನಡ ವಾಹಿನಿ ಕಾರ್ಯನಿರ್ವಣಾಧಿಕಾರಿ ಮಂಜುನಾಥ ಕಟೀಲು, ಆಡಳಿತಾಧಿಕಾರಿ ಅಮರೇಶ ಅಳಗುಂಡಗಿ, ಮುಖ್ಯ ಗುರುಗಳಾದ ಎಸ್.ಎಸ್.ದೊಡಮನಿ, ಎಸ್.ಬಿ. ಹೆಗಳಾಡಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಭಿನಂದನ ಬೆಳಗಲ್ಲಿ, ಸ್ನೇಹಾ ಯಚ್ಚಿ, ಶಿಕ್ಷಕಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಭಾರತೀಯ ಸಂಸ್ಕøತಿಯನ್ನು ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮವನ್ನು ಸ್ನೇಹಲತಾ ಹಿರೇಮನಿ ಹಾಗೂ ಬಿ.ಎಸ್. ಹತ್ತಿ ನಿರೂಪಿಸಿದರು.