Feedback
Banner

64ನೇ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

64ನೇ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 64ನೇ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರಧಾನಕಾರ್ಯದರ್ಶಿ ಶಿವಾನಂದ ಕೆಲೂರ, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಪ್ರಧಾನ ಕಾರ್ಯದರ್ಶಿ ಬಸವರಾಜ ಕೌಲಗಿ ಹಾಗೂ ಕ್ರೀಡಾಕ್ಷೇತ್ರದಿಂದ ಬಸವರಾಜ ಬಾಗೇವಾಡಿ ಅವರಿಗೆ ಎಕ್ಸಲಂಟ್ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿವರ್ಗದಿಂದ ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ರಾಜಶೇಖರ ಕೌಲಗಿ, 64ನೇ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದ ಸಾದಕರಿಗೂ ಹಾಗೂ ಪ್ರಶಸ್ತಿಗೂ ಮೆರಗು ಬಂದಂತಾಗಿದೆ. ಪ್ರಶಸ್ತಿಗಳು ಸಾದಕರನ್ನು ಹಿಂಬಾಲಿಸಿಕೊಂಡು ಬರುತ್ತಿರುವುದು ಹಾಗೂ ಉತ್ತಮ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ ಎಂದರು. ಈ ಪ್ರಶಸ್ತಿಯಿಂದ ಇವರ ಜವಾಬ್ದಾರಿಗಳು ಇನ್ನು ಹೆಚ್ಚಿದಂತಾಗಿದೆ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಶಿವಾನಂದ ಕೆಲೂರ ಹಾಗೂ ದೀನ ದಲಿತ ಹಾಗೂ ಅನಾಥ ಮಕ್ಕಳ ಬಾಳಿನ ಆಶಾಕಿರಣವಾಗಿರುವ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್‍ಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೊರುತ್ತಿರುವ ಬಸವರಾಜ ಬಾಗೇವಾಡಿ ಅವರಿಗೆ ಈ ಪ್ರಶಸ್ತಿಗಳು ಅವರ ಜವಾಬ್ದಾರಿ ಹೆಚ್ಚು ಮಾಡಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಸಾದನೆಯ ಹಾದಿಯಲ್ಲಿ ಮನಸ್ಸನ್ನು ಹಿಡಿತ ಹಾಗೂ ಸದೃಡಗೊಳಿಸಬೇಕು ಆಗ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಶಿಕ್ಷಕರ ಹಾಗೂ ಮ್ಕಕಳ ಸಾಧನೆಯ ಮೂಲಕ ನಮ್ಮನ್ನು ಗುರುತಿಸಿಲಾಗಿದೆ ಆದ್ದರಿಂದ ಈ ಪ್ರಶಸ್ತಿ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸಲ್ಲಬೇಕೆಂದರು. ಜಿಲ್ಲಾ ಆಡಳಿತ ಈ ಪ್ರಶಸ್ತಿಯನ್ನು ನಮಗೆ ನೀಡಿ ನಮ್ಮಗೆ ಇನ್ನು ಹೆಚ್ಚು ಜವಾಬ್ದಾರಿಯನ್ನು ನೀಡುವ ಮುಖಾಂತರ ನಮ್ಮನ್ನು ಗುರುತಿಸಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಜೀವನದಲ್ಲಿ ಅಡೆತಡೆಗಳು ಹಾಗೂ ಏರಿಳಿತಗಳು ಸಾಮಾನ್ಯ ಅವುಗಳನ್ನು ಮೆಟ್ಟಿನಿಂತಾಗ ಜೀವನದಲ್ಲಿ ಯಶಸ್ಸು ಖಂಡಿತ ಎಂದರು. ಮಕ್ಕಳು ದೇಶದ ಅವಿಭಾಜ್ಯ ಅಂಗ ಅವರ ಸಾಧನೆಗೆ ಪೂರಕವಾಗಿ ನಮ್ಮ ಟ್ರಸ್ಟ್ ಸದಾಕಾಲ ಕಾರ್ಯನಿರ್ವಹಿಸುತ್ತಿದೆ, ಮಕ್ಕಳ ಸಾಧನೆಗಳಿಂದ ಜಿಲ್ಲಾಡಳಿತ ನಮ್ಮ ಸಂಸ್ಥಗೆ ಪ್ರಶಸ್ತಿ ನೀಡಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಪ್ರಾಧಾನ ಕಾರ್ಯದರ್ಶಿ ಬಸವರಾಜ ಕೌಲಗಿ, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅನಾಥ, ಬಡ ಹಾಗೂ ದೀನ ದಲಿತ ಮಕ್ಕಳ ಜೀವನದ ಆಶಾ ಕಿರಣವಾಗಿದೆ ಇಲ್ಲಿ ಶಿಕ್ಷಣ,ವಸತಿ ಹಾಗೂ ದಾಸೊಹ ನೀಡುವ ಮುಖಾಂತರ ಈ ಮ್ಕಕಳ ಜೀವನ ಉನ್ನತಿಗೆ ಹಗಲಿರುಳು ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ದಯಾನಂದ ಕೆಲೂರ, ಮಂಜುನಾಂಥ ಕೌಲಗಿ, ಆಡಳಿತಾಧಿಕಾರಿಗಳಾದ ಸುನೀಲ ನಾವಲಗಿ, ಅಮರೇಶ ಅಳಗುಂಡಗಿ, ಮುಖ್ಯಗುರುಗಳಾದ ಎಸ್.ಎಸ್. ದೊಡಮನಿ, ಎಸ್.ಬಿ. ಹೆಗಳಾಡಿ, ಎ.ಬಿ. ಮಾಲಗಾರ, ಸಿ.ಆರ್.ಡೊಣೂರ, ಅಲ್ಲಾಬಕ್ಷ ಮುಜಾವರ ಹಾಗೂ ಎಲ್ಲ ಶಿಕ್ಷಕವೃಂದ ಉಪಸ್ಥಿತರಿದ್ದರು.
ಬಸವರಾಜ ವಾಲೀಕಾರ ಸ್ವಾಗತಿಸಿದರು, ಬಿ.ಎಸ್. ಹತ್ತಿ ನಿರೂಪಿಸಿ ವಂದಿಸಿದರು.