Feedback
Banner

Teacher’s Day-2019

ಶಿಕ್ಷಕರು ವಿದ್ಯಾರ್ಥಿಗಳ ಜೀವನ ನಿರ್ಮಾಣದ ನಿರ್ಮಾತೃಗಳು ರಾಮಕೃಷ್ಣಾಶ್ರಮ ಪರಮಪೂಜ್ಯ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರದಂದು ಚಾಲುಕ್ಯ ನಗರದ ಮಹೇಶ್ವರಿ ಸಭಾ ಭವನದಲ್ಲಿ ಶಿಕ್ಷಕರ ದಿನಾಚಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಶಿಕ್ಷಕರಿಗೆ ವಿಶೇಷ ಶೈಕ್ಷಣ ಕ ಉಪನ್ಯಾಸ ನೀಡಿ ಮಾತನಾಡಿದ ವಿಜಯಪುರ ಗದಗ ರಾಮಕೃಷ್ಣಾಶ್ರಮ ಪರಮಪೂಜ್ಯ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಶಿಕ್ಷಕರು ವಿದ್ಯಾರ್ಥಿಗಳ ಜೀವನ ನಿರ್ಮಾಣದ ನಿರ್ಮಾತೃಗಳು, ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕøತಿ, ಸಾಮಾಜಿಕ ಕಳಕಳಿ, ವಿನಮ್ರತೆ, ದೇಶ ನಿರ್ಮಾಣದ ಪೂರಕವಾದ ವಾತಾರಣ ನಿರ್ಮಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ, ಶಿಕ್ಷಕರಿಗೆ ತಮ್ಮದೇ ಆದ ಇತಿಮಿತಿಗಳು ಇವೆ ಅವುಗಳನ್ನು ಅನುಸರಿಸಬೇಕೆಂದರು. ಎಕೆಂದರೆ ಭಾರತ ದೇಶದಲ್ಲಿ ಶಿಕ್ಷಕರಿಗೆ ಪವಿತ್ರ ಸ್ಥಾನವಿದೆ ಅವರು ಸದಾ ಅಧ್ಯಯನಶೀಲರಾಗಿರಬೇಕು ನಿಂತ ನೀರು ರೋಗಕ್ಕೆ ಕಾರಣ, ಹರಿಯುತ್ತಿರುವ ನೀರು ಔಷಧ ಇದ್ದಹಾಗೆ, ಶಿಕ್ಷಕರ ಜ್ಞಾನ ಯಾವಾಗಲು ಹರಿಯುತ್ತಿರುವ ನೀರಾಗಿರಬೇಕು ಎಂದರು. ಪ್ರತಿಯೊಬ್ಬ ಶಿಕ್ಷಕ ನಡೆದಾಡುವ ದೇವರು, ತನ್ನ ವೃತ್ತಿ ತತ್ವವನ್ನು ಮರೆಯಬಾರದು ಎಂದರು. ಜಗತ್ತೀನ ಎಲ್ಲ ದೇಶಗಳು ಭಾರತೀಯ ಸಂಸ್ಕøತಿಯನ್ನು ಅನುಸರಿಸುತ್ತಿವೆ ಶಿಕ್ಷಕನು ಮಾಂತ್ರಿಕ ಇದ್ದಹಾಗೆ ಅವನು ತನ್ನ ಜ್ಞಾನದಿಂದ ಇಡೀ ಜಗತ್ತನ್ನೇ ಬದಲಾಯಿಸಬಲ್ಲನು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಸ್ವಾಮೀ ವಿವೇಕಾನಂದರ ಸಮೃದ್ಧ ಭಾರತ ನಿರ್ಮಾಣದ ಕಲ್ಪನೆ ಶಿಕ್ಷಕರಿಂದ ಮಾತ್ರ ಸಾಧ್ಯ, ಶಿಕ್ಷಕರು ಶಿಕ್ಷಣ ನೀಡುವುದರ ಜೊತೆಗೆ ಸಾಮಾಜೀಕ ಜವಾಬ್ದಾರಿ ಮತ್ತು ಬದುಕಿನಲ್ಲಿ ಬರುವ ಅಡೆತಡೆಗಳನ್ನು ಎದುರಿಸುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ವಿದ್ಯಾರ್ಥಿಗಳ ಜೀವನದ ಬೆಳಕನ್ನು ಬೆಳಗುವ ಶಿಕ್ಷಕ ದೀಪವಿದ್ದಂತೆ, ದೇಶದ ಬದಲಾವಣೆ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು. ಶಿಕ್ಷಕರಿಗೆ ಸೇವಾ ಭದ್ರತೆ ನೀಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಯೋಜನೆ ರೂಪಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೊಪ್ಪಳದ ಚೈತನ್ಯಾನಂದ ಸ್ವಾಮೀಜಿಗಳು, ರಾಯಚೂರಿನ ದಕ್ಷಣಾನಂದ ಸ್ವಾಮೀಜಿಗಳು, ವಿಜಯಪುರದ ನರೇಶಾನಂದ ಸ್ವಾಮೀಜಿಗಳು, ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ, ನಿರ್ದೇಶಕರಾದ ದಯಾನಂದ ಕೆಲೂರ, ಮಂಜುನಾಥ ಕೌಲಗಿ, ಎಕ್ಸಲಂಟ್ ಪಿ.ಯು.ಕಾಲೇಜಿನ ಪ್ರಾಚಾರ್ಯ ಡಿ.ಎಲ್. ಬನಸೋಡೆ, ಹಾಗೂ ಎಲ್ಲ ಶಿಕ್ಷಕವೃಂದ ಉಪಸ್ಥಿತರಿದ್ದರು.