ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚಾರಣೆಯನ್ನು
ಹೆಣ್ಣು ಮತ್ತು ಗಂಡು ದೇಶದ ಎರಡು ಕಣ್ಣು : ಸ್ತೀ ರೋಗತಜ್ಞ ಡಾ|| ರಾಜಶ್ರೀ ಅಕ್ಕಿ
ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚಾರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾತನಾಡಿದ ವಿಜಯಪುರ ಖ್ಯಾತ ಸ್ತೀ ರೋಗತಜ್ಞ ಡಾ|| ರಾಜಶ್ರೀ ಅಕ್ಕಿ ಹೆಣ್ಣು ಮತ್ತು ಗಂಡು ದೇಶದ ಎರಡು ಕಣ್ಣು, ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ,ಸಾಮಾಜಿಕವಾಗಿ,ಭೌಧಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಹೆಣ್ಣೊಂದು ಕಲೆತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಮಕ್ಕಳು ಮುಖ್ಯವಾಗಿ ಉನ್ನತ ಶಿಕ್ಷಣ ಪಡೆಯಬೇಕು ಇದರಿಂದ ಸವಾಲುಗಳು ಎದುರಿಸುವ ಮನೋಭಾವನೆ ಅವರಲ್ಲಿ ಬರುತ್ತೆ. ಭಾರತ ಸರಕಾರ ಹೆಣ್ಣು ಮಕ್ಕಳಿಗಾಗಿ ಬೇಟಿ ಬಚಾವೂ ಬೇಟಿ ಪಡಾವ, ಇನ್ನೂ ಹಲವಾರು ಸೌಲಭ್ಯಗಳನ್ನು ನೀಡಿದೆ ಅವುಗಳನ್ನು ಸದುಪಿಯೋಗ ಪಡೆಯಬೇಕು. ಮುಖ್ಯವಾಗಿ ಹೆಣ್ಣು ಭ್ರೋಣ ಹತ್ಯಯನ್ನು ತಡೆಯಬೇಕು ಇಂತಹ ಘಟನೆಗಳು ಕಂಡು ಬಂದಾಗ ಕುಡಲೇ ಪೋಲಿಸರಿಗೆ ಮಾಹಿತಿ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಕುಟುಂಬದಲ್ಲಿ ಒಂದು ಹೆಣ್ಣು ಮಗು ಇದ್ದರೆ ಸಾಕು ಕೊನೆಯ ಸಂದರ್ಭದಲ್ಲಿ ತಂದೆ ತಾಯಿಗಳನು ಕೈ ಹಿಡಿಯುತ್ತಾರೆ. ಗಂಡು ಮಕ್ಕಳಲ್ಲಿ ಆ ಮನೋಭಾವನೆ ಕಡಿಮೆ ಆಗುತ್ತಿದೆ ಎಂದರು. ಹೆಣ್ಣು ಮಕ್ಕಳು ಯಾವುದೇ ಕ್ಷೇತ್ರದಲ್ಲಿ ತನ್ನ ಸಾಮಥ್ರ್ಯ ತೊರಿಸಬಲ್ಲಳು ಎಂದರು
ಈ ಸಂದರ್ಭದಲ್ಲಿ ಶಿವಲೀಲಾ ಕೆಲೂರ, ಎನ್.ಜಿ.ಯರನಾಳ, ಮುಖ್ಯ ಶಿಕ್ಷಕರಾದ ಎಸ್.ಎಸ್. ದೊಡಮನಿ, ಎಸ್.ಬಿ. ಹೆಗಳಾಡಿ, ಎಸ್.ಎಸ್. ಸೂಡಿ. ಬಿ.ಆರ್.ಮಾಲತಿಕುಮಾರ, ಜೆ.ಎಸ್.ಹದಿಮೂರ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜೋತಿಪ್ರಭಾ ಗಡೆದ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.