ನೀರು ಬರುಬಳಕೆಯ ಮಾದರಿ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಗೆ (ಪ್ರಥಮ ಸ್ಥಾನ) ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅರಕೇರಿ ಗ್ರಾಮದ ಮುರಾರ್ಜೀ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ತಾಲೂಕ ಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು “ನೀರು ಮರು ಬಳಕೆ ಮಾದರಿ”ಯನ್ನು ತಯಾರಿಸಿದ್ದು ನೇಹಾ ಶಿವಾನಂದ ಕೆಲೂರ ಹಾಗೂ ಸೃಷ್ಠಿ ಹತ್ತರಕಿಹಾಳ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಚ್ಚಲು ನೀರುನ್ನು ವಿವಿಧ ಹಂತದಲ್ಲಿ ಸ್ವಚ್ಚಮಾಡಿ ಅದನ್ನು ಮರುಬಳಕೆಯ ವಿಧಾನ : ಬಚ್ಚಲು ನೀರುನ್ನು ಒಂದು ಟ್ಯಾಂಕನಲ್ಲಿ ಶೆಕರಿಸಿ ಆ ನಿರಿನಲ್ಲಿ ಅಡಗಿರವ ಗಲೀಜು ನೀರು ಕೇಳಗೆ ಉಳಿದು ಕೊಳ್ಳುತ್ತದೆ. ನಂತರ ಮೇಲಿನ ನೀರನ್ನು ಸಣ್ಣ ಉಸುಕಿನಲ್ಲಿ ಹಾಯುಸುವುದು, ದ್ವಿತೀಯ ಹಂತ ದಪ್ಪ ಖಡಿಯಲ್ಲಿ(ದಪ್ಪ ಕಲ್ಲಿನ ಚುರು)ಹಾಯಿಸುವುದು, ತೃತೀಯ ಹಂತ ಆ ನೀರುನ್ನು ಸಣ್ಣ ಖಡಿಯಲ್ಲಿ(ಸಣ್ಣಕಲ್ಲಿನ ಚುರು) ಹಾಯಿಸುವುದು, ನಾಲ್ಕನೆ ಹಂತ ಈ ನೀರನನ್ನು ಇದ್ದಿಲು ಮುಖಾಂತರ ಹಾಯಿಸಿ ಒಂದು ಟ್ಯಾಂಕನಲ್ಲಿ ಸಂಗ್ರಹ ಮಾಡಿ ಅದರಲ್ಲಿ ಬ್ಲೀಚಿಂಗ ಪೌಡರ ಹಾಕಿದಾಗ ನೀರು ಶುದ್ದುವಾಗುತ್ತದೆ. ನಂತರ ಆ ನೀರನ್ನು ಗೃಹಬಳಕೆಗೆ, ಬೈಕ ತೊಳಿಯಲು, ಗಾರ್ಡನ, ಟಾಯಿಲೆಟ್, ಫ್ಲಷಗೆ, ಮುಂತಾದವುಗಳಿಗೆ ಬಳೆಕೆ ಮಾಡಬಹುದು. ಈ ಒಂದು ಮಾದರಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು, ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರು, ಆಡಳಿತ ಮಂಡಳಿ ಮುಖ್ಯಗುರುಗಳು,ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.